ಅಂಬಿಗರ ಚೌಡಯ್ಯ ಚರಿತ್ರೆ

           ಅಂಬಿಗರ ಚೌಡಯ್ಯನು ಅಂಬಿಗ ವೃತ್ತಿಯವನು. ಅಂಬಿಗರು ಹೊಳೆದಾಟಿಸುವ ಕೆಲಸದ ಜೊತೆಗೆ ಮೀನು ಹಿಡಿಯುವುದು ಮತ್ತು ನೀರಿಗೆ ಸಂಭಂದಿಸಿದ ಕೆಲಸಗಳನ್ನು ನಿರ್ವಹಿಸುವವರು. ಕಲ್ಯಾಣದಲ್ಲಿ ವೃತ್ತಿಪರರಾದ ಕಾಯಕ ಜೀವಿಗಳ ಜೊತೆ ಹೊಸ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ತರುಣನಾದ ಚೌಡಯ್ಯನು ಆ ಸಮಾಜ ಚಿಂತಕರ ಚಳುವಲಿಯನ್ನು ಸೇರಲು ಕಲ್ಯಾಣಕ್ಕೆ ಹೋಗುತ್ತಾನೆ. ಅನುಭವ ಮಂಟಪದ ಚಿಂತನಾ ಗೋಷ್ಠಿಯಲ್ಲಿ ಕಾಲ ಕಾಲಕ್ಕೆ ತನ್ನ ಜೀವನ ಸವೆಸಿದ್ದಾನೆ. ತನ್ನ ಅಂಬಿಗ ವೃತ್ತಿಯನ್ನು ಅಲ್ಲಿನ ತ್ರಿಪುರಾಂತಕೇಶ್ವರ ಕೆರೆಯಲ್ಲಿ ಜಲ ವಿಹಾರಿಗಳ ಸೇವೆ ಮಾಡಿದ್ದಾನೆ.

           ಕಲ್ಯಾಣದ ಕ್ರಾಂತಿ ಯಾದ ನಂತರ ಉಳಿದ ಶರಣರು, ಎಲ್ಲಕಡೆ ಹಂಚಿಹೋಗುತ್ತಾರೆ; ಚೌಡಯ್ಯ ಚನ್ನಬಸವಣ್ಣ ನವರೊಟ್ಟಿಗೆ ವಚನಗಳ ಕಟ್ಟುಗಳನ್ನು ಹೊತ್ತುಕೊಂಡು ಉಳವಿಗೆ ಹೋಗಿ ನಂತರ ತನ್ನೂರಾದ ಶಿವಪುರಕ್ಕೆ ಬರುತ್ತಾನೆ. ಚೌಡಯ್ಯನ ವಿವಾಹ ಕಲ್ಯಾಣಕ್ಕೆ ಹೋಗುವ ಮುನ್ನ ಆಗಿದ್ದನ್ನೂ ಅಥವಾ ಕಲ್ಯಾಣದಿಂದ ಬಂದ ಮೇಲೆ ಆದನೋ ಎಂದು ತಿಳಿದಿಲ್ಲ. ಆತ ಮದುವೆಯಾಗಿ ಪುರವಂತ ನೆಂಬ ಮಗನಿಗೆ ಜನ್ಮ ಕೊಟ್ಟಿದ್ದು ಮುಂದೆ ಪುರವಂತ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಆ ಸಂಘಟನೆಯ ಮುಕಾಂತರ ಸುತ್ತಮುತ್ತಲಿನ ಊರುಗಳಲ್ಲಿ ಹಬ್ಬ ಹರಿದಿನ, ಜಾತ್ರೆಗಳ ಸಮಯದಲ್ಲಿ ಶರಣರ ಮತ್ತು ತನ್ನ ವಚನಗಳ ಮುಕಾಂತರ ಜನಜಾಗ್ರತಿ ಮೂಡಿಸುತ್ತಿದ್ದರು.

           ಚೌಡಯ್ಯನು ಕಲ್ಯಾಣ ಕ್ರಾಂತಿಯನಂತರ ತನ್ನೂರಾದ ಶಿವಪುರಕ್ಕೆ ಬಂದು ನೆಲಸಿ ತನ್ನ ಹೊಳೆದಾರಿಸುವ ಕಾಯಕದಲ್ಲಿ ನಿರತನಾದನು. ಚೌಡಯ್ಯನು ಪವಾಡ ಪುರುಷ ಎಂದು ಹೇಳಲಾಗುತ್ತದೆ ಹೀಗೆ ಒಂದು ಬಾರಿ ಗುತ್ತರಸನ ಸೇನಾಧಿಪತಿಯನ್ನು ಹಾವಿನ ವಿಷದಿಂದ ಪಾರುಮಾಡಿದ್ದನ್ನು ಕಂಡು ಅರಸ ತುಂಗಾಭದ್ರಾ ನದಿಯ ದಂಡೆಯಲ್ಲಿ ಒಂದು ವಿಶಾಲವಾದ ಫಲವತ್ತಾದ ಭೂಮಿಯನ್ನು ನೀಡುತ್ತಾನೆ. ಚೌಡಯ್ಯನು ಆ ಭೂಪ್ರದೇಶವನ್ನು ಲೋಕ ಸಂಗ್ರಹ ಕಾರ್ಯದಲ್ಲಿ ನಿರತರಾದ ಶಿವದೇವರಿಗೆ ವಹಿಸುತ್ತಾನೆ, ಚೌಡಯ್ಯನ ಈ ತ್ಯಾಗವನ್ನು ಕಂಡು ಅಂದಿನ ಶಿವಪುರಕ್ಕೆ ಚೌಡಯ್ಯದಾನಪುರ ಎಂದು ಶಿವದೇವರು ನಾಮಕರಣ ಮಾಡುತ್ತಾನೆ.

           ಅಂಬಿಗರ ಚೌಡಯ್ಯನು ಧೀರ್ಗಾಯುಷಿ, ೧೨ನೇ ಶತಮಾನದ ಮಧ್ಯಭಾಗದಿಂದ ೧೩ನೇ ಶತಮಾನದ ಕಾಲದಲ್ಲಿಯೂ ಆತ ಬದುಕಿದ್ದ. ತನ್ನ ದೇಹ ನೂರರ ಮೇಲೆ ದಾಟಿದಾಗ ಹೊಳೆಹಾಯಿಸುವ ಕಾಯಕ ಮಾಡಲಾದಾಗ ಚೌಡಯ್ಯ ಸಮಾಧಿಸ್ಥನಾಗುತ್ತಾನೆ. ಅಂಬಿಗರ ಚೌಡಯ್ಯನ ಈ ಸಮಾಧಿ ಚೌಡದಾನಪುರದ ಮುಕ್ತೇಶವಾರ ದೇವಸ್ಥಾನದ ಹಿಂದೆ ತುಂಗಾಭದ್ರಾ ದಡದಲ್ಲಿ ಶೋಭಿಸುತ್ತದೆ.

ಅಂಬಿಗರ ಚೌಡಯ್ಯನವರ ವಿಶೇಷತೆಗಳು:

ನೇರ ಮತ್ತು ನಿಷ್ಕಪಟ ವಚನಗಳು: ಅವರ ವಚನಗಳು ಸರಳ ಮತ್ತು ನೇರ ಭಾಷೆಯಲ್ಲಿ ಬರೆಯಲ್ಪಟ್ಟಿದ್ದು, ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವಂತಿದ್ದವು.
ಸಮಾಜ ಸುಧಾರಣೆ: ಅವರು ಜಾತಿವಾದ, ಮೂಢನಂಬಿಕೆ ಮತ್ತು ಅಸಮಾನತೆಯ ವಿರುದ್ಧ ತೀವ್ರವಾಗಿ ಹೋರಾಡಿದರು.
ಕಾಯಕದ ಮಹತ್ವ: ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡು, ಕಾಯಕದ ಮಹತ್ವವನ್ನು ಅವರು ತಮ್ಮ ವಚನಗಳಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.

ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ಪ್ರಮುಖ ವಿಷಯಗಳು:

ಜಾತಿ ವ್ಯವಸ್ಥೆ: ಅವರು ಜಾತಿ ವ್ಯವಸ್ಥೆಯನ್ನು ಕಟ್ಟುವ ಕೆಲಸ ಮಾಡುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಧರ್ಮ: ಅವರು ಧರ್ಮದ ಹೆಸರಿನಲ್ಲಿ ನಡೆಯುವ ಕೆಟ್ಟ ಕೆಲಸಗಳನ್ನು ಖಂಡಿಸಿದ್ದಾರೆ.
ಸಮಾನತೆ: ಎಲ್ಲಾ ಮನುಷ್ಯರು ಸಮಾನರು ಎಂಬ ತತ್ವವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.
ಕಾಯಕ: ಕಾಯಕವೇ ಧರ್ಮ ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ.

ಅಂಬಿಗರ ಚೌಡಯ್ಯನವರ ವಿಶೇಷತೆಗಳು:

ಕನ್ನಡ ಸಾಹಿತ್ಯ: ಕನ್ನಡ ಸಾಹಿತ್ಯಕ್ಕೆ ಅವರು ಅನೇಕ ಅಮೂಲ್ಯವಾದ ವಚನಗಳನ್ನು ನೀಡಿದ್ದಾರೆ.
ಸಮಾಜ ಸುಧಾರಣೆ: ಅವರ ವಚನಗಳು ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಶರಣ ಸಂಪ್ರದಾಯ: ಶರಣ ಸಂಪ್ರದಾಯವನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.